ಅಭಿಪ್ರಾಯ / ಸಲಹೆಗಳು

ರಫ್ತು ನಿರ್ವಹಣೆ ತರಬೇತಿ ಕಾರ್ಯಕ್ರಮಗಳು

ವಿಟಿಪಿಸಿ ಸಂಸ್ಥೆಯು ತನ್ನ ರಫ್ತುದಾರರ ಬಳಗ ಮತ್ತು ವಿವಿಧ ಪಾಲುದಾರರ ಅನುಕೂಲಕ್ಕಾಗಿ ನಿರಂತರವಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜನಪ್ರಿಯ ಕಾರ್ಯಕ್ರಮಗಳಾದ ರಫ್ತು ಜಾಗೃತಿ ಕಾರ್ಯಕ್ರಮಗಳು (EAPs), ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮಗಳು (EMTPs), ಸೆಮಿನಾರ್‌ಗಳು,ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಂಬಧಿಸಿದ ಕಾರ್ಯಾಗಾರಗಳು / ಸಮ್ಮೇಳನಗಳ ಜೊತೆಗೆ ರಾಜ್ಯಾದ್ಯಂತ ಸಂವಾದಾತ್ಮಕ ಮತ್ತು ಮುಕ್ತ ಪರಿಹಾರ ಸಭೆಗಳು ಇದರಲ್ಲಿ ಸೇರಿವೆ. ಕೈಗಾರಿಕಾ / ರಫ್ತುದಾರ ಬಳಗದ ಅನುಕೂಲಕ್ಕಾಗಿ ರಫ್ತು ಪ್ರಚಾರ ಮಂಡಳಿಗಳು, ವಾಣಿಜ್ಯ ಮಂಡಳಿಗಳು, ಕೈಗಾರಿಕಾ ಸಂಘಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳ ಸಹಯೋಗದೊಂದಿಗೆ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮಾಹಿತಿಯ ಅಂತರವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ರಫ್ತುದಾರರಿಗೆ ರಾಜ್ಯ / ಕೇಂದ್ರ ಸರ್ಕಾರದ ವಿವಿಧ ಏಜೆನ್ಸಿಗಳು ನೀಡುವ ಸೇವೆಗಳನ್ನು ಮತ್ತು ರಫ್ತು ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ಪರಿಷ್ಕರಿಸಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುತ್ತದೆ.

ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ (EMTP)

ವಿಟಿಪಿಸಿ ಸಂಸ್ಥೆಯು ಆರು ದಿನಗಳ ಅಲ್ಪಾವಧಿಯ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಅತ್ಯಲ್ಪ ಶುಲ್ಕದಲ್ಲಿ ನಡೆಸುತ್ತದೆ. ಈ ಕಾರ್ಯಕ್ರಮದಲ್ಲಿ ರಫ್ತು ಮಾರುಕಟ್ಟೆ, ಕಾರ್ಯವಿಧಾನಗಳು ಮತ್ತು ಶಿಷ್ಟಾಚಾರಗಳು, ದಸ್ತಾವೇಜೀಕರಣ, ಹಣಕಾಸು, ಪ್ಯಾಕೇಜಿಂಗ್, ಸಾಗಣೆ, ಪ್ರಮಾಣೀಕರಣಗಳು/ಗುಣಮಟ್ಟ, ವಿಮೆ ಮತ್ತು ರಫ್ತು ಉತ್ತೇಜನಕ್ಕಾಗಿ ವಿವಿಧ ಏಜೆನ್ಸಿಗಳು ನೀಡುವ ಇತರೆ ಸೌಲಭ್ಯಗಳು ಮತ್ತು ರಫ್ತು ವಹಿವಾಟಿಗೆ ಸಂಬಧಿಸಿದ ಎಲ್ಲಾ ಮೂಲಭೂತ ಮತ್ತು ಪ್ರಮುಖ ಸೂಕ್ಷ ವ್ಯತ್ಯಾಸಗಳ ಬಗ್ಗೆ ಆಳವಾದ ತರಬೇತಿ ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿರುತ್ತದೆ. ಈ ತರಬೇತಿಯು ರಫ್ತುದಾರಿಕೆಯ ಅನುಭವವನ್ನು ಪಡೆಯಲು ಕ್ಷೇತ್ರ ಭೇಟಿಯನ್ನೂ ಸಹ ಒಳಗೊಂಡಿರುತ್ತದೆ. ದಾಖಲಾತಿಯು ಪ್ರತಿ ಬ್ಯಾಚಿನಲ್ಲಿ ೨೫ ಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗಿದೆ. ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಪ್ರತಿನಿಧಿಗಳಿಗೆ ‘ಭಾಗವಹಿಸುವಿಕೆ ಪ್ರಮಾಣ ಪತ್ರವನ್ನು’ ವಿತರಿಸಲಾಗುವುದು.

ರಫ್ತು ತರಬೇತಿ ಕಾರ್ಯಕ್ರಮ (ಇಟಿಪಿ) ಎಂಬ ಸಂಕ್ಷಿಪ್ತ ಆವೃತ್ತಿಯಲ್ಲಿ ವಿಟಿಪಿಸಿ ಸಂಸ್ಥೆಯು ಇಎಂಟಿಪಿಯನ್ನು ಶೈಕ್ಷಣಿಕ ಅಗತ್ಯಗಳಿಗೆ ಪೂರಕವಾಗುವಂತೆ ಹೊಂದಿಸುತ್ತದೆ.

ಯಾರು ಭಾಗವಹಿಸಬಹುದು?

ರಫ್ತು ಸಂಸ್ಥೆಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳಿಂದ ನಿರೀಕ್ಷಿತ ರಫ್ತುದಾರರು / ರಫ್ತು ಕಾರ್ಯ ನಿರ್ವಾಹಕರು ರಫ್ತು ಕ್ಷೇತ್ರದಲ್ಲಿ ಹೊಸದನ್ನು ಕಲಿಯ ಬಯಸುವ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಇತ್ತೀಚಿನ ನವೀಕರಣ​ : 08-07-2022 10:32 AM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080