ಅಭಿಪ್ರಾಯ / ಸಲಹೆಗಳು

ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವಿಕೆ

ಎಂಎಸ್‍ಎಂಇ ವಲಯಗಳು ವಸ್ತು ಪ್ರದರ್ಶನಗಳಲ್ಲಿ ಮತ್ತು ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದರಿಂದ ಮಾರುಕಟ್ಟೆ ಜ್ಞಾನಕ್ಕೆ ಸಂಬಂಧಿಸಿದಂತೆ ತಮಗಿರುವ ಸವಾಲುಗಳಿಂದ ಹೊರಬರಲು ಅನುಕೂಲವಾಗುವುದಲ್ಲದೆ ಅವರಿಗೆ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಒಂದು ವೇದಿಕೆಯನ್ನು ಒದಗಿಸುತ್ತದೆ. ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವುದರಲ್ಲಿ ಮತ್ತು ಬ್ರಾಂಡ್‍ಗಳನ್ನು ನಿರ್ಮಿಸುವುದರಲ್ಲಿ ವಸ್ತುಪ್ರದರ್ಶನಗಳು ಇಂದು ಪ್ರಮುಖ ಸಾಧನಗಳಾಗಿ ಸ್ವೀಕರಿಸಲ್ಪಟ್ಟಿವೆ. ನವೀನ ಉತ್ಪನ್ನಗಳನ್ನು ಪ್ರದರ್ಶಿಸಲು, ಸಂದರ್ಶಕರನ್ನು ಆಕರ್ಷಿಸಲು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಇದು ದೇಶದ ತಾಂತ್ರಿಕ ಮತ್ತು ಉತ್ಪಾದನಾ ಸಾಮಥ್ರ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಹಾಗೂ ಹಣಕಾಸು ಮತ್ತು ತಾಂತ್ರಿಕ ಸಹಯೋಗಕ್ಕಾಗಿ ವಿದೇಶಿ ಪಾಲುದಾರರನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸಲು ಇಂತಹ ವಸ್ತುಪ್ರದರ್ಶನಗಳಲ್ಲಿ ಭಾಗವಹಿಸುವುದು ಸಹಕಾರಿಯಾಗಿದೆ ಎಂಬುದು ಈಗಾಗಲೇ ಸಾಬೀತಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯಶಸ್ಸನ್ನು ಹೊಂದಲು ಇರುವ ಕಿರುದಾರಿಗಳು ಎಂದು ಇದನ್ನು ಪರಿಗಣಿಸಲಾಗಿದೆ.

ಖರೀದುದಾರ ಮಾರಾಟಗಾರರ ಭೇಟಿಗೆ ಅನುಕೂಲವಾಗುವಂತೆ ಭಾರತ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಓ), ರಫ್ತು ಉತ್ತೇಜನ ಮಂಡಳಿ ಮತ್ತು ಇತರೆ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸುವ ರಾಜ್ಯ / ರಾಷ್ಟ್ರ / ಅಂತರರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನಗಳಲ್ಲಿ ಉದ್ಯಮಿಗಳು / ಉದ್ಯಮಗಳು ಭಾಗವಹಿಸಲು ವಿಟಿಪಿಸಿ ಸಂಸ್ಥೆಯು ತನ್ನ ಬೆಂಬಲವನ್ನು ನೀಡುತ್ತದೆ. ವ್ಯಾಪಾರದ ಉತ್ತೇಜನಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಸ್ತುಪ್ರದರ್ಶನಗಳು ಮತ್ತು ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ವೆಚ್ಚವನ್ನು ಸಹಾಯಧನ ನೀಡುವ ಮೂಲಕ ಎಂಎಸ್‍ಎಂಇ ವಲಯಗಳಿಗೆ ನೆರವು ನೀಡಲಾಗುತ್ತಿದೆ. ವಿಟಿಪಿಸಿ ಸಂಸ್ಥೆಯು ಕ್ರಮವಾಗಿ ಮೇಳಗಳಲ್ಲಿ ಕರ್ನಾಟಕ ರಾಜ್ಯ ಪೆವಿಲಿಯನ್ ಅನ್ನು ಆಯೋಜಿಸುತ್ತದೆ. ಆಯೋಜಕರು ಬೃಹತ್ ಪ್ರಮಾಣದಲ್ಲಿ ಮಳಿಗೆಗಳನ್ನು ತೆಗೆದುಕೊಂಡು ರಾಜ್ಯಾದ್ಯಂತ ಇರುವ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಪ್ರದರ್ಶನಗಳ ಲಾಭ ಪಡೆಯಲು, ವ್ಯಾಪಾರ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಮತ್ತು ತಮ್ಮ ಉತ್ಪನ್ನಗಳ ಮಾರಾಟ ಮಾಡಲು ಕಡಿಮೆ ದರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ನೀಡುತ್ತಾರೆ.

ವಿಟಿಪಿಸಿ ಸಂಸ್ಥೆಯು ಭಾಗವಹಿಸುವ ಕೆಲವು ಪ್ರಮುಖ ವಸ್ತುಪ್ರದರ್ಶನಗಳ ಜೊತೆಗೆ ವರ್ಷಕ್ಕೊಮ್ಮೆ ಹದಿನೈದು ದಿನಗಳ ಕಾಲ ನವೆಂಬರ್ ತಿಂಗಳಿನಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುವ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್), ಭಾರತ ಅಂತರರಾಷ್ಟ್ರೀಯ ಬೃಹತ್ ವ್ಯಾಪಾರ ಮೇಳ (ಐಐಎಂಟಿಎಫ್)ನಲ್ಲಿ ಭಾಗವಹಿಸುತ್ತದೆ.

ಇತ್ತೀಚಿನ ನವೀಕರಣ​ : 29-05-2021 11:30 AM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080