ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ರಫ್ತು ಯೋಜನೆಗಾಗಿ ವ್ಯಾಪಾರ ಮೂಲಸೌಕರ್ಯ (ಟೈಸ್‌ ಯೋಜನೆ )

ಕೇಂದ್ರ ಸರ್ಕಾರದ ಹಿಂದಿನ ಯೋಜನೆಯಾದ ‘ರಫ್ತು ಮೂಲಸೌಕರ್ಯ ಮತ್ತು ಸಂಬಧಿತ ಚಟುವಟಿಕೆಗಳ ಅಭಿವೃದ್ಧಿಗೆ ರಾಜ್ಯಗಳಿಗೆ ನೆರವು (ASIDE)’ ಯೋಜನೆಯ ಬದಲಾಗಿ ‘ರಫ್ತಿಗಾಗಿ ವ್ಯಾಪಾರ ಮೂಲಸೌಕರ್ಯ (TIES)’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಅದರ ಮೂಲಕ ರಾಜ್ಯಾದ್ಯಂತ ರಫ್ತು ಮೂಲಸೌಕರ್ಯಕ್ಕೆ ಧನಸಹಾಯದ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿರುತ್ತದೆ. ಬಾರ್ಡರ್ ಹ್ಯಾಟ್ಸ್, ಲ್ಯಾಂಡ್ ಕಸ್ಟಮ್ಸ್ ಸ್ಟೇಷನ್‌ಗಳು, ಗುಣಮಟ್ಟದ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಯೋಗಾಲಯಗಳು, ಕೋಲ್ಡ್ ಚೈನ್‌ಗಳು, ವ್ಯಾಪಾರ ಪ್ರಚಾರ ಕೇಂದ್ರಗಳು, ಒಣ ಬಂದರುಗಳು, ರಫ್ತು ಉಗ್ರಾಣ ಮತ್ತು ಪ್ಯಾಕೇಜಿಂಗ್, ಎಸ್.ಇ.ಜಡ್‌ಗಳು ಮತ್ತು ಬಂದರುಗಳು / ವಿಮಾನ ನಿಲ್ದಾಣಗಳ ಸರಕು ಟರ್ಮಿನಸ್‌ಗಳಂತಹ ರಫ್ತು ಸಂಪರ್ಕಗಳೊದಿಗೆ ಮೂಲ ಸೌಕರ್ಯ ಯೋಜನೆಗಳನ್ನು ಸ್ಥಾಪಿಸುವುದರ ಮತ್ತು ನವೀಕರಿಸುವುದರ ಮೂಲಕ ರಾಜ್ಯಾದ್ಯಂತ ರಫ್ತುದಾರರಿಗೆ ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಈ ಯೋಜನೆಯು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರಫ್ತು ಲಾಜಿಸ್ಟಿಕ್ಸ್ಗೆ ಸಂಬಧಿಸಿದ ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕ ಯೋಜನೆಗಳಿಗೆ ಈ ಯೋಜನೆಯು ಒತ್ತು ನೀಡುತ್ತದೆ.

ಈ ಯೋಜನೆಯ ಅಡಿಯಲ್ಲಿ ರಫ್ತು ಉತ್ತೇಜನ ಮಂಡಳಿಗಳು, ಸರಕು ಸಮಿತಿಗಳು, ವಿಶೇಷ ಆರ್ಥಿಕ ವಲಯಗಳ (ಎಸ್‌ಇಜಡ್) ಪ್ರಾಧಿಕಾರಗಳು ಮತ್ತು ಅಗ್ರ ವ್ಯಾಪಾರ ಸಂಸ್ಥೆಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಭಾರತದ ಆಮದು ರಫ್ತು ನೀತಿ (EXIM)ಯಡಿಯಲ್ಲಿ ಮಾನ್ಯತೆ ಪಡೆದಿವೆ ಹಾಗೂ ಈ ಯೋಜನೆಯಡಿ ಹಣಕಾಸಿನ ನೆರವು ಪಡೆಯಲು ಅರ್ಹತೆಯನ್ನು ಹೊಂದಿವೆ.
 
https://commerce.gov.in/wp-content/uploads/2020/03/MOC_636289964499400263_TIES_Ffinal_guidelines_18_04_2017.pdf
 

ಇತ್ತೀಚಿನ ನವೀಕರಣ​ : 12-03-2021 11:30 AM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ