ಅಭಿಪ್ರಾಯ / ಸಲಹೆಗಳು

ಡಬ್ಲ್ಯುಟಿ ಒ ಮತ್ತು ಐ ಪಿ ಆರ್ ಪ್ರಸಾರ ಕೋಶ

ಈ ಕೋಶವು ವಿಶ್ವ ವ್ಯಾಪಾರ ಸಂಸ್ಥೆ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಕೈಗಾರಿಕಾ, ಶೈಕ್ಷಣಿಕ ಹಾಗೂ ಸರ್ಕಾರದ ಎಲ್ಲಾ ಪಾಲುದಾರರ ಅನುಕೂಲಕ್ಕಾಗಿ ಸಾಮಥ್ರ್ಯ ಅಭಿವೃದ್ಧಿ ಕಾರ್ಯಗಾರಗಳನ್ನು ನಡೆಸುತ್ತದೆ. ಬೌದ್ಧಿಕ ಆಸ್ತಿ ಹಕ್ಕುಗಳ ಅನ್ವಯದಲ್ಲಿ ಪೇಟೆಂಟ್, ಟ್ರೇಡ್ ಮಾರ್ಕ್, ಕಾಪಿರೈಟ್ಸ್, ಇಂಡಸ್ಟ್ರಿಯಲ್ ಡಿಸೈನ್ (ಕೈಗಾರಿಕಾ ವಿನ್ಯಾಸ), ಸೆಮಿ ಕಂಡಕ್ಟರ್ ಇಂಟಿಗ್ರೇಟೆಡ್ ಲೇಔಟ್, ಜಿಯೋಗ್ರಾಫಿಕಲ್ ಇಂಡಿಕೇಷನ್ಸ್ (ಭೌಗೋಳಿಕ ಗುರುತುಗಳು), ಪ್ಲಾಂಟ್ ವರೈಟಿ ರಕ್ಷಣೆ, ಸಾಂಪ್ರದಾಯಿಕ ಜ್ಞಾನ ಹಾಗೂ ವ್ಯಾಪಾರ ರಹಸ್ಯ ವಿಭಾಗಗಳು ಕ್ರೋಢೀಕೃತವಾಗಿದೆ.
ಈ ಬೌದ್ಧಿಕ ಆಸ್ತಿ ಹಕ್ಕುಗಳ ಕಾರ್ಯಾಗಾರಗಳಲ್ಲಿ ವಿಶ್ವ ವ್ಯಾಪಾರ ಸಂಸ್ಥೆ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ಸಂಬಂಧಪಟ್ಟ ಸಮಕಾಲೀನ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಈ ವಿಭಾಗವು ಬೌದ್ಧಿಕ ಆಸ್ತಿ ಹಕ್ಕುಗಳ ಸೃಷ್ಟಿ, ರಕ್ಷಣೆ, ವ್ಯಾಪಾರ ಕ್ರಿಯೆ, ಹುಡುಕಾಟ ಹಾಗೂ ಹಕ್ಕುಗಳನ್ನು ಜಾರಿಗೊಳಿಸುವ ಬಗ್ಗೆ ಕಾರ್ಯಾಗಾರದಲ್ಲಿ ಜ್ಞಾನ ಹಾಗೂ ಅರಿವು ಮೂಡಿಸುತ್ತದೆ. ಈ ಕೋಶವು ಶೈಕ್ಷಣಿಕ ಸಂಸ್ಥೆಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕು ವಿಭಾಗಗಳನ್ನು ತೆರೆಯಲು ಸಹಾಯ ಮಾಡುತ್ತದೆ.
ಕರ್ನಾಟಕ ಸರ್ಕಾರವು ಭೌಗೋಳಿಕ ಸೂಚ್ಯಂಕಗಳು (ಜಿಐ) ನೀತಿಯನ್ನು  ಮೇ 2019 ರಲ್ಲಿ ಘೋಷಿಸಿದೆ. ವಿಟಿಪಿಸಿ ಸಂಸ್ಥೆಯು ಈ ನೀತಿಯನ್ನು ಅನುಷ್ಠಾನಗೊಳಿಸುವ ನೋಡಲ್‌ ಸಂಸ್ಥೆಯಾಗಿರುತ್ತದೆ. ಈ ನೀತಿಯಲ್ಲಿ ಸೂಚಿಸಲಾದ ಪ್ರಮುಖ ಕ್ರಮಗಳ ಮೂಲಕ ಜಿಐಗಳಿಗೆ (ಬೌದ್ಧಿಕ ಆಸ್ತಿ ಸಾಧನ) ಒತ್ತು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಇತ್ತೀಚಿನ ನವೀಕರಣ​ : 08-07-2022 10:34 AM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080