ಅಭಿಪ್ರಾಯ / ಸಲಹೆಗಳು

ಸಂಕ್ಷೀಪ್ತ ವಿವರ

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ  ಕೇಂದ್ರ (VTPC)ವು ಕರ್ನಾಟಕ ರಾಜ್ಯದ ಅಂತರರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸಲೆಂದೇ ಗುರುತಿಸಲಾದ ರಾಜ್ಯ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. 1965 ರಲ್ಲಿ ಆರಂಭವಾದಾಗಿನಿಂದ ಇಲ್ಲಿಯವರೆಗೆ, ಸಂಸ್ಥೆಯು ಅಂತರಾಷ್ಟ್ರೀಯ ವ್ಯಾಪಾರದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಉದಯೋನ್ಮುಖ ರಫ್ತುದಾರರಿಗೆ ಸಹಕಾರ ಮತ್ತು ಅನುಕೂಲ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದೆ.

 

ಮೈಸೂರು ಸೊಸೈಟಿಯ ನೋಂದಣಿ ಕಾಯಿದೆ, 1960 ರ ಅಡಿಯಲ್ಲಿ 25ನೇ ಫೆಬ್ರವರಿ 1971 ರಂದು “ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ (VITC)” ಎಂದು ನೋಂದಾಯಿಸಲಾಗಿದೆ. ಸರ್ಕಾರಿ ಆದೇಶ CI 64 SPI 2012 (P2), ಬೆಂಗಳೂರು ರಂದು  ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ (VITC)ವನ್ನು "ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ  ಕೇಂದ್ರ (VTPC)" ಎಂದು ಮರು ನಾಮಕರಣಗೊಳಿಸಲಾಗಿದೆ.

 

ಹಲವಾರು ಕಾರ್ಯಕ್ರಮಗಳು, ಯೋಜನೆಗಳು, ನೀತಿಗಳು, ಪ್ರೋತ್ಸಾಹ ಮತ್ತು ರಿಯಾಯಿತಿಗಳ ಮೂಲಕ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ  ಕೇಂದ್ರ (VTPC)ವು ರಫ್ತು ಘಟಕಗಳು ಮತ್ತು SEZ ಗಳಿಗೆ ಉತ್ತೇಜನವನ್ನು ನೀಡುತ್ತಿದೆ. ವ್ಯಾಪಾರಿಗಳ/ ರಫ್ತುದಾರರ ಕುಂದುಕೊರತೆಗಳನ್ನು/ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಹಾಗೂ ಇವರುಗಳ ಪ್ರತಿನಿಧಿಯಾಗಿ ವೇದಿಕೆಯನ್ನು ಸಿದ್ಧಪಡಿಸುವ ಒಂದು ಪೂರ್ವಕ ಸಂಸ್ಥೆಯಾಗಿ ಸಹ ಕಾರ್ಯನಿರ್ವಹಿಸುತ್ತಿದೆ

 

VTPC ಸಂಸ್ಥೆಯು ರಾಜ್ಯದ ತನ್ನ SME ಗಳು, ಕುಶಲಕರ್ಮಿಗಳು ಮತ್ತು  ರಫ್ತುದಾರರಿಗೆ ರಾಜ್ಯ ಮಟ್ಟದ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲು ಸಹಾಯಧನವನ್ನು ಒದಗಿಸುವುದು  ಮತ್ತು ವೇದಿಕೆಯನ್ನು ಸಿದ್ಧಪಡಿಸುವುದು  ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ರಾಜ್ಯ ರಫ್ತು ಶ್ರೇಷ್ಠತೆ ಪ್ರಶಸ್ತಿಗಳನ್ನು ನೀಡುವ ಮೂಲಕ ರಫ್ತು ಶ್ರೇಷ್ಠತೆಯನ್ನು ಗುರುತಿಸುತ್ತಿದೆ. ರಫ್ತು ಕ್ಷೇತ್ರಕ್ಕೆ ಅವಶ್ಯಕತೆ ಇರುವ ಹಾಗೂ ರಾಜ್ಯದ ಭೌಗೋಳಿಕ ಉಪಲಬ್ಧಗಳು (GI), ಬೌದ್ಧಿಕ ಆಸ್ತಿ ಹಕ್ಕುಗಳ (IPR) ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 

 

ವಿಟಿಪಿಸಿ ಸಂಸ್ಥೆಯು ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರದ  ರಫ್ತು ವಲಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು/ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಹಾಗೂ ಲಾಜಿಸ್ಟಿಕ್ಸ್ ವಲಯದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಗೊಳಿಸುವ VTPC ವಿವಿಧ GoI ಮತ್ತು GoK ಕಾರ್ಯಕ್ರಮಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಪ್ರಚಾರ ಮತ್ತು ಅನುಕೂಲಕ್ಕಾಗಿ ಹಾಗೂ ಲಾಜಿಸ್ಟಿಕ್ಸ್ ವಲಯದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸುವ ನೋಡಲ್ ಏಜೆನ್ಸಿಯಾಗಿದೆ.

ಇತ್ತೀಚಿನ ನವೀಕರಣ​ : 29-10-2021 04:08 PM ಅನುಮೋದಕರು: VTPC


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080